ಮಾತು ನಿಂತಿದೆ,
ಮೌನ ಬೇಕಿದೆ,
ಮನಸ್ಸು ಬರಿದಾಗಿದೆ...
ದಾರಿ ಕಾಣದಾಗಿದೆ...
ಎಣ್ಣೆಯೂ ಮುಗಿದಿದೆ,
ದೀಪವೂ ಆರಿದೆ,
ಕತ್ತಲೆಯೇ ಸುತ್ತಲೂ...
ಬೆಳಕೇ ಕಾಣದಿರಲು...
ನಿಜದಿ ಅಂಧಕಾರವೋ,
ದಿಟ್ಟಿಯೇ ಕಳೆದಿದೆಯೋ,
ನೆರಳೂ ಜೊತೆಗಿಲ್ಲ...
ಸಂಗಾತಿಯ ಸುಳಿವಿಲ್ಲ...
ಕದವು ತೆರೆದೀತೆ...
ಹಣತೆ ಹೊತ್ತೀತೆ...
ಬದುಕಿದರೆ ಬಂದೇನು...
ಬರೆದಾರೆ ಬರೆದೇನು...
ಬೆಳಕು ಕಂಡ ಆ ಕ್ಷಣದಲಿ...
ಮನುಷ್ಯತ್ವದ ಪರವಾಗಿ ಮಾತನಾಡಲು ಎಂದೂ ಭಯಪಡಬಾರದು
8 hours ago
8 comments:
ಭಾವನೆ ಚೆನ್ನಾಗಿ ಮೂಡಿಬಂದಿದೆ...
ತಾಳ್ಮೆ ಕಾಯುವಿಕೆಗೆ ಪ್ರತಿಫಲ ಸಿಕ್ಕೆ ಸಿಗುತ್ತದೆ..
ನಿರೀಕ್ಷೆ ಸಫಲವಾಗುತ್ತದೆ..
ಚಂದದ ಕವನ
artha poornavagide..
ಅಂಧಕಾರದೊಳಗಿನ ಆತಂಕಕ್ಕೆ ಭಾವನೆಯ ಬಣ್ಣವನ್ನು ತುಂಬಲಾಗಿದೆ, ಬೆಳಕು ಕಂಡ ಆ ಕ್ಷಣದಲ್ಲಿ. ಮೌನದ ಸಂಗಾತಿಗಾಗಿ ಬದುಕಿನ ನೀರಿಕ್ಷೆಯ ಭಾವನೆ ಚೆನ್ನಾಗಿ ಮೂಡಿಬಂದಿದೆ.
hey, chennagide..moorane stanza tumba chennagide...!
® ನೋಡಿ ತುಂಬಾ ಸಂತೋಷವಾಯಿತು.
visit my site
http://spn3187.blogspot.in/
Also say Your Friends
Find me
ವಾವಾ ಬ್ರೋ ತುಂಬಾ ಚೆನ್ನಾಗಿದೆ
ಮಂಕುತಿಮ್ಮನ ಕಗ್ಗ ದ ಸಾರಾಂಶ ಸಿಗುತ್ತಾ ತಿಳಿಸಿ. ನನಗೆ ಕನ್ನಡ ಬರೋಲ್ಲ.
Post a Comment