ಮಗುವೇ, ನೀನೆಷ್ಟು ಸುಖಿ ಆ ಮಣ್ಣಿನಲ್ಲಿ
ಆಟವಾಡುತ ಈ ಮುಂಜಾವಿನಲ್ಲಿ
ಆ ಮುರಿದ ಕಡ್ಡಿಯ ಜೊತೆಯಲಿ
ಬೆರೆಯಿತೆನ್ನ ಮುಗುಳ್ನಗೆ ನಿನ್ನಾಟದಲಿ
ನಾ ಮುಳುಗಿಹೆನು ನನ್ನ ಲೆಕ್ಕಪತ್ರಗಳಲಿ
ನೀ ನನ್ನತ್ತ ನೋಡಿದರೆ ಭಾವಿಸಬಹುದು
'ಇದೆಂಥಾ ಆಟವಯ್ಯಾ ನಿನ್ನದು,
ಚೆಂದದ ಬೆಳಗೊಂದು ಹಾಳಾಗಿಹುದು'
ಮಗುವೇ, ಮರೆತಿದ್ದೇನೆ ನಾ ಮಣ್ಣು ಮರಳನ್ನು
ಅವುಗಳೊಂದಿಗೆ ಮೈಮರೆತು ಆಡುವುದನ್ನು
ದುಬಾರಿ ಆಟಿಕೆಗಳ ಬಯಕೆಯೊಂದಿಗೆ
ತುಂಬಿಸುತಿಹೆನು ನಗ-ನಾಣ್ಯಗಳಿಂದ ಕೊಪ್ಪರಿಗೆ
ಕೈಗೆಟುಕಿದ ವಸ್ತುಗಳೆಲ್ಲ ನಿನ್ನ ಆಟಿಕೆಗಳು
ರೂಪಿಸಬಲ್ಲೆ ನೀ ಅವುಗಳಲ್ಲೆ ಸುಂದರ ಆಟ
ನನ್ನವುಗಳೇನಿದ್ದರೂ ನಿಲುಕದ ನಕ್ಷತ್ರಗಳು
ಹಿಡಿಯಲವನು ವ್ಯಯಿಸುವೆ ನನ್ನೆಲ್ಲ ಸಮಯ, ಸಾಮರ್ಥ್ಯ
ತೀರದಾಸೆಗಳ ಸಾಗರ ದಾಟಲು
ಮುರುಕು ದೋಣಿಯಲ್ಲಿ ನನ್ನ ಹೋರಾಟ
ಗೆಲುವೆಂಬ ಸೋಲಿನ ಸುಳಿಯಲ್ಲಿ, ಮರೆತಿದ್ದೇನೆ;
ಮಗುವೇ, ಈ ನನ್ನ ಜೀವನವೂ ಒಂದು ಆಟ!
(ಮೂಲ: ರವೀಂದ್ರನಾಥ ಟಾಗೋರ್, Playthings)
Child, how happy you are sitting in the dust, playing with a broken twig all the morning.
I smile at your play with that little bit of a broken twig.
I am busy with my accounts, adding up figures by the hour.
Perhaps you glance at me and think, "What a stupid game to spoil your morning with!"
Child, I have forgotten the art of being absorbed in sticks and mud-pies.
I seek out costly playthings, and gather lumps of gold and silver.
With whatever you find you create your glad games, I spend both my time and my strength over things I never can obtain.
In my frail canoe I struggle to cross the sea of desire, and forget that I too am playing a game.
ಅಗಲಿದ ಗೆಳೆಯನಿಗೊಂದು ನುಡಿನಮನ
1 week ago
11 comments:
nice translation. :-)
ವಿನುತಾ...
ತುಂಬಾ...ತುಂಬಾ ಚೆನ್ನಾಗಿದೆ...
ನಾನು ನನ್ನ ಮಗನಿಗೆ ಹೇಳಿದ ಹಾಗಿದೆ...
ಅಭಿನಂದನೆಗಳು...
ವಿನುತಾ ಮೇಡಮ್,
ಟಾಕೂರರ ಪದ್ಯ ಚೆನ್ನಾಗಿ ಅನುವಾದಿಸಿದ್ದೀರಿ....ನನ್ನ ಬಾಲ್ಯದ ನೆನಪಾಯಿತು....ಈಗಲೂ ನನಗೆ ಮಕ್ಕಳ ಜೊತೆ ಆಟವಾಡಲು ಇಷ್ಟಪಡುತ್ತೇನೆ...
ಧನ್ಯವಾದಗಳು...
ವಿನುತಾರವರೇ,
ಸುಂದರವಾದ ಪದ್ಯ... ನನ್ನ ಸಹೋದರಿಯ ಮಗಳು ಆಟವಾಡುವಾಗ, ನನಗಿರುವ ಈ ರಿಸೆಶನ್, ಸಂಬಳ ಕಡಿತ, ಕೆಲಸದ ಅಭದ್ರತೆ, ಮುಂತಾದ ಯಾವುದೇ ಟೆನ್ಶನ್ ಈ ಮಗುವಿಗಿಲ್ಲವಲ್ಲ ಅಂತ ಕರುಬುತ್ತಿದ್ದುದು ನೆನಪಾಯಿತು. ಚಿಕ್ಕ ಮಕ್ಕಳ ಜೊತೆ ಬೆರೆತು ಆಟವಾಡುವುದು ಒಳ್ಳೇ ಸ್ಟ್ರೆಸ್ ಬಸ್ಟರ್. ಸುಂದರ ಅನುವಾದಕ್ಕೆ ಅಭಿನಂದನೆಗಳು.
-ಉಮೇಶ್
ವಿನುತಾ ಅವರೇ
ಸು೦ದರ ಅನುವಾದ, ಕವನ ಚೆನ್ನಾಗಿದೆ. ನಿಮ್ಮ ಉಳಿದ ಲೇಖನಗಳನ್ನೂ ಓದಿದೆ. ಚೆನ್ನಾಗಿವೆ
Tumbaa chennagide
ಸುಶ್ರುತ ಅವರೇ,
ಥ್ಯಾ೦ಕ್ಸ :)
ಪ್ರಕಾಶ್ ಅವರೇ,
ನನ್ನ ಬಾಲ್ಯ ಹಾಗು ಇ೦ದಿನ ಸ್ಥಿತಿಯ ಪರಿಕಲ್ಪನೆ ಈ ಅನುವಾದ.
ಮೆಚ್ಚುಗೆಗೆ ಧನ್ಯವಾದಗಳು.
ಶಿವೂ ಅವರೇ,
ಬಾಲ್ಯವೇ ಹಾಗಲ್ಲವೇ, ನಮ್ಮ ಜೀವನದ ಸುವರ್ಣ ಪುಟಗಳು.
ನಿಮ್ಮ ಬಾಲ್ಯವನ್ನು ನೆನಪಿಸಿದ್ದಲ್ಲಿ ಅನುವಾದ ಸಾರ್ಥಕ.
ಧನ್ಯವಾದಗಳು.
ಉಮೇಶ್ ಅವರೇ,
ನನ್ನಕ್ಕನ ಮಗಳೂ ಅನುವಾದಕ್ಕೆ ಸ್ಪೂರ್ತಿ.
ಪ್ರೋತ್ಸಾಹಕ್ಕೆ ಧನ್ಯವಾದಗಳು.
ಪರಾ೦ಜಪೆಯವರೇ,
ಪ್ರೋತ್ಸಾಹಕ್ಕೆ ಋಣಿ.
ಡಾ. ಗುರುಮೂರ್ತಿಯವರೇ,
ಮೆಚ್ಚುಗೆಗೆ ಧನ್ಯವಾದಗಳು.
ವಿನುತ,
ಸೊಗಸಾದ ಮತ್ತು ಅಷ್ಟೇ ಅರ್ಥಗರ್ಭಿತ ಅನುವಾದ, ಚೆನ್ನಾಗಿದೆ...
ರಾಜೇಶ್,
ಅನುವಾದ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಸೊಗಸಾದ ಅನುವಾದ..
ಧನ್ಯವಾದಗಳು ಆಶಾ
Post a Comment