skip to main |
skip to sidebar
ಕವಿತೆಯೆಂದರೇನು?
ಕವಿತೆ, ಕೆಲವು ಪದಗಳ ಸಾಲೇ
ಸಾಲಿನ ಕೊನೆಯ ಪ್ರಾಸವೇ
ಪ್ರಾಸದೊಳಗಿನ ಭಾವವೇ
ಭಾವದೊಳಗಿನ ಕಲ್ಪನೆಯೇ
ಕಲ್ಪನೆಗೊಂದು ಚಿಂತನೆಯೇ
ಚಿಂತಣದೊಂದಿನ ವಿಷಯವೇ
ವಿಷಯದ ಹಿಂದಿನ ಘಟನೆಯೇ
ಘಟನೆಗೊಂದು ತರ್ಕವೇ
ತರ್ಕಕ್ಕೆ ನಿಲುಕದ ಸತ್ಯವೇ
ಸತ್ಯದೊಳಗಿನ ಸೌಂದರ್ಯವೇ
ಸೌಂದರ್ಯವೆಂಬ ಕನಸೇ
ಕನಸಿಂದ ದೊರೆತ ಸ್ಪೂರ್ತಿಯೇ
ಸ್ಪೂರ್ತಿಯಿಂದ ಹುಟ್ಟಿದ ಪದಗಳೇ
ಕವಿತೆಯೆಂದರೇನು?
3 comments:
ವಿನುತಾ...
ಎಷ್ಟು ಪ್ರಾಸ ಬದ್ಧವಾಗಿ..
ಅರ್ಥಗರ್ಭಿತವಾಗಿ ಬರೆದಿದ್ದೀರಿ...
ನೀವು ಹೇಳುವ ಎಲ್ಲವೂ ಇದ್ದರೇನೆ ಅದು ಕವಿತೆಯಾಗುವದು..
ಸುಂದರ ಕವಿತೆಗೆ..
ಅಭಿನಂದನೆಗಳು..
ಏನೋ ತಾವೇ ಹೇಳಬೇಕು! ಸಕ್ಖಾತಾಗಿದೆ! :)
ಪ್ರಕಾಶ್ ಅವರೇ,
ಪ್ರೋತ್ಸಾಹಕ್ಕೆ ಧನ್ಯವಾದಗಳು
ಪ್ರತಿಭಾ,
ಹೇಳ್ತಿಲ್ಲ, ಕೇಳ್ತಿರೋದು! :))
Post a Comment