Monday, February 02, 2009

ಬಾಳಬುತ್ತಿ


ನೆನ್ನೆ ಕಳೆದಿದೆ ನಾಳೆ ಬರಲಿದೆ
ಇಂದು ನಿನ್ನದಾಗಿದೆ ಎಂಬ ಮಾತುಗಳು
ಆಗಿವೆಯೇ ಅರ್ಥಹೀನ ತತ್ವಗಳು
ಹಿಡಿತಕೂ ಸಿಗದೆ ಓಡುತಿರಲು ದಿನಗಳು

ಏನನು ಹಿಡಿಯಲು ಹಾರುತಿಹೆವು
ಯಾರ ಕಾಣಲು ಓಡುತಿಹೆವು
ಕೂಡಿ ಕಳೆದು ಗುಣಿಸಿ ಭಾಗಿಸಿ
ಯಾವ ಲೆಖ್ಖದುತ್ತರ ಹುಡುಕುತಿಹೆವು

ಸುಂದರ ನಾಳೆಗಳ ಕನಸಿನಲಿ
ಇಂದೆಂಬ ನೆನ್ನೆಯ ಕನಸು ಕಮರಿತೇ
ನಾಳೆಯಡುಗೆಯ ಚಿಂತೆಯಲಿ
ಇಂದಿನೂಟದ ರುಚಿ ಹಳಸಿತೇ

ಇಂದಿಗೆ ನೆನ್ನೆಯ ನೆನಪು
ಇಂದು ನಾಳೆಯ ನೆನಪು
ಯಾವ ನೆನ್ನೆಯವರೆಗೀ ನೆನಪು
ಎಲ್ಲಿಯ ನಾಳೆಯವರೆಗೀ ನೆನಪು

ಭವ್ಯ ಭವಿಷ್ಯತ್ತಿಗಾಗಿ ಕೂಡಿಡುತಿಹೆವು
ಇಂದನ್ನು ನೆನಪುಗಳ ಬುತ್ತಿಗಳಲಿ
ದೊರಕುವುದೆಂತು ಸಮಯ ಸವಿಯಲದನು
ಓಡುತಿರಲು ಕಾಣದ ಕೊನೆ ತಲುಪಲು

- ವಿನುತ

7 comments:

ವಿ.ರಾ.ಹೆ. said...

hmm ..nice poem..
u r a blogger since 2005! great .:)

Ittigecement said...

ಕವನ.. ತುಂಬಾ ಚೆನ್ನಾಗಿದೆ...

ಶಬ್ಧಗಳು..,

ಭಾವಗಳು..

ಚೆನ್ನಾಗಿ ಬಿಂಬಿತವಾಗಿದೆ..

ಅಭಿನಂದನೆಗಳು...

ವಿನುತ said...

ವಿಕಾಸ್,

೨೦೦೫ ರಲ್ಲೇ ನಿಮ್ಮ "ಎಲ್ಡೆಕ್ರೆ ಹೊಲ, ಮಧ್ಯ ಬಾವಿ ಸಾಕು" ಅನಿಸಿಕೆಗೆ ನನ್ನ ಸಹಮತ ವ್ಯಕ್ತಪಡಿಸಿದ್ದೆ!! ಹಾಗಾಗಿ ಬ್ಲಾಗ್ ’ಅಸ್ತಿತ್ವ’ ದಲ್ಲಿದೆಯೇ ಹೊರತು ’ಜಾರಿ’ ಯಲ್ಲಿಲ್ಲ. ಆದರೂ ಕೆಲವೊಮ್ಮೆ ಅಭ್ಯಾಸ ಬಲ ಅಷ್ಟೆ, ಬರೆದು ಬಿಡ್ತೀನಿ :))

ಪ್ರಕಾಶ್,

ಧನ್ಯವಾದಗಳು.

Anonymous said...

ನಿನ್ನೆಯ ನೆನಪುಗಳ
ನಾಳೆಯ ಕನಸುಗಳ
ಇಂದಿನ ಯೋಚನೆಗಳ
ನಡುವೆ ಸಂತಸ ಬಲು ವಿರಳ
ಮನಸಿಗೆಂದು ನಿರಾಳ...

frequency ಜಾಸ್ತಿ ಆಗಿದೆ ... ನಮ್ಮದೊಂದೇ ಅಭಿಲಾಷೆ ... ಹೀಗೆ ಬರೆಯುತ್ತಿರಿ ...

ವಿನುತ said...

ರಾಜೀವ್,

ನನ್ನ ೫ ಪ್ಯಾರಾಗಳನ್ನ ನೀವು ೫ ಸಾಲುಗಳಲ್ಲಿ ಹೇಳಿದ್ದೀರಿ !!
ನಿಮ್ಮ ಈ ಪ್ರತಿಭೆಗೆ ಅಭಿನಂದನೆಗಳು...

Santhosh Rao said...

wow.. super, tumba chennagide..

ವಿನುತ said...

ಧನ್ಯವಾದಗಳು ಸಂತೋಷ್..