Wednesday, February 11, 2009

ಪ್ರೀತಿಯೆಂದರೇನು?


ತಾಯಿಯ ಮಮತೆ
ತಂದೆಯ ವಾತ್ಸಲ್ಯ
ಗುರುವಿನ ಕಕ್ಕುಲತೆ
ಹಿರಿಯರ ಹಾರೈಕೆ
ಕಿರಿಯರ ವಾಂಛಲ್ಯ
ಸಖನ ಪ್ರೇಮ
ಎಲ್ಲವೂ ಪ್ರೀತಿಯ ರೀತಿಗಳಾದರೆ
ಪ್ರೀತಿಯೆಂದರೇನು?

ಹೆತ್ತವರಿಗೆ ಗೌರವ
ಗುರುಗಳಿಗೆ ಭಕ್ತಿ
ಹಿರಿಯರಿಗೆ ಮರ್ಯಾದೆ
ಕಿರಿಯರಿಗೆ ಅಕ್ಕರೆ
ಗೆಳೆಯರಿಗೆ ಸ್ನೇಹ
ಪ್ರಿಯಕರನಿಗೊಲವು
ಎಲ್ಲವೂ ಪ್ರೀತಿಯ ಅಭಿವ್ಯಕ್ತಿಗಳಾದರೆ
ಪ್ರೀತಿಯೆಂದರೇನು?

ಕರುಳಿನ ಕರೆ
ಎದೆಯ ತುಡಿತ
ಮನಸಿನ ಆನಂದ
ಹೃದಯದ ಮಿಡಿತ
ಕಣ್ಣಿನ ಮಿಂಚು
ತುಟಿಯ ಮುಗುಳ್ನಗು
ಎಲ್ಲವೂ ಪ್ರೀತಿಯ ಮುಖಗಳಾದರೆ
ಪ್ರೀತಿಯೆಂದರೇನು?

-ವಿನುತ

10 comments:

Ittigecement said...

ವಿನುತಾ..

ನನಗೆ ಈ ಕವನ ಬಹಳ ಇಷ್ಟವಾಯಿತು..

ಪ್ರೀತಿಯ ಹಲವು ಮಜಲುಗಳನ್ನು ತೆರೆದಿಟ್ಟಿದ್ದೀರಿ...

ಪ್ರೇಮಿಗಳ ದಿನಕ್ಕೆ ಇದು ಒಳ್ಳೆಯ ಕಾಣಿಕೆ..

ಚಂದದ ಕವಿತೆಗಾಗಿ..

ಅಭಿನಂದನೆಗಳು..

Pratibha said...

ನನಗೆ ಬೇರೆ ಬೇರೆ ಸಮಯಕ್ಕೆ ಬೇರೆ ಬೇರೆ ಅರ್ಥ ಇದೆ ಅನಿಸುತ್ತದೆ. ಅಥವಾ ನಾವು ಜೀವನದಲ್ಲಿ ಯಾವ ಘತ್ತದಲ್ಲಿದಿವಿ ಅದರ ಮೇಲೆ ನಮ್ಮ ಪ್ರೀತಿಯ ಅನುಭವ ಬೇರೆ ಆಗಿರುತ್ತೆ, ಕೆಲವೊಮ್ಮೆ ಪ್ರೀತಿ ನಂಬಿಕೆಯಲ್ಲಿ ಕಾಣ ಸಿಗುತ್ತೆ, ಕೆಲವೊಮ್ಮೆ ಸ್ವಾತಂತ್ರದಲ್ಲಿ, ಕೆಲವೊಮ್ಮೆ ಅಕ್ಕರೆಯಲ್ಲಿ, ಮೇಲಾಗಿ ಎಲ್ಲಿ ಹುಡುಕುತ್ತೇವೋ ಅಲ್ಲಿ ಸಿಗುತ್ತೆ, ಹೇಗೆ ಬಯಸುತ್ತೇವೋ ಹಾಗೆ ಸಿಗುತ್ತೆ. ಪ್ರತಿ ಸಾರಿ ಥರ ಇದೂ ಸಹ ಸೊಗಸಾಗಿದೆ...

ಈ ಬಾರಿ ಬರುವಷ್ಟರಲ್ಲಿ ಬ್ಲಾಗ್ ಸಹಾ ನಿನ್ನ ಪದಗಳಂತೆ, ಅಭಿವ್ಯಕ್ತಿಯಂತೆ ಸುಂದರವಾಗಿದೆ..ತುಂಬ ಖುಷಿ ಆಯ್ತು :)

ಇನ್ನು ಹಲವು ಕನ್ನಡ ಬ್ಲಾಗುಗಳನ್ನು ನೋಡಿ ಸಂತೋಷ ಆಯ್ತು...ಕನ್ನಡಕ್ಕಾಗಿ ಟೈಪ್ ಮಾಡಿ! ;)

ವಿನುತ said...

ಧನ್ಯವಾದಗಳು ಪ್ರಕಾಶ್,
ಒಂದು ಆಚರಣೆಯ ಮೊದಲು ಅದರ ಅರ್ಥವನ್ನರಿಯುವ ಒಂದು ಸಣ್ಣ ಪ್ರಯತ್ನವಷ್ಟೆ.

ವಿನುತ said...

ಸತ್ಯವಾದ ಮಾತು ಪ್ರತಿ...
ಪ್ರೀತಿಯು ಸರ್ವತ್ರ. ಆದರೆ ಪ್ರತಿಯೊಬ್ಬ ವ್ಯಕ್ತಿಯೊಂದಿಗಿನ ನಮ್ಮ ಸಂಬಂಧ ಹಾಗೂ ಬೆಸೆದುಕೊಂಡಿರುವ ಭಾವದೊಂದಿಗೆ ನಮ್ಮ ಪ್ರೀತಿಯ ರೀತಿಯೂ ಬದಲಾಗಿರುತ್ತದೆ.

ಕನ್ನಡದ ಬ್ಲಾಗುಗಳಿಗೆ ನಿನಗೆ ಸ್ವಾಗತ :)

shivu.k said...

ವಿನುತಾ ಮೇಡಮ್,

ಪ್ರಕಾಶ್ ಹೆಗಡೆಯವರ ಬ್ಲಾಗಿನಿಂದ್ ಇಲ್ಲಿಗೆ ಬಂದೆ....ಪ್ರೀತಿಯ ಹಲವು ರೂಪಗಳನ್ನು ಹೇಳಿದ್ದೀರಿ..ಕವನ ಚೆನ್ನಾಗಿದೆ..ಇಷ್ಟವಾಯುತು....ನಿಮ್ಮ ಬ್ಲಾಗನ್ನು ಹಿಂಬಾಲಿಸುತ್ತೇನೆ.....

ಬಿಡುವಾದಾಗ ನನ್ನ ಬ್ಲಾಗಿಗೊಮ್ಮೆ ಬೇಟಿಕೊಡಿ....ಅಲ್ಲಿ ಈಗ ವ್ಯಾಲೆಂಟೈನ್ಸ್ ಡೇ ಕೊಡುಗೆಯಾಗಿ ಒಂದು ಪುಟ್ಟ ಲೇಖನವಿದೆ....ಓದಿ...

ವಿನುತ said...

ಶಿವು ಸರ್,

ಧನ್ಯವಾದಗಳು

Sunil Mallenahalli said...

Vinuthakka..(nivu nanaginta hiriyavaru annavudu nanna bhaavane?)
nimma KAVANA sarala padagalinda koodi..tumba chennagi mooDi bandide..Vandanegalu


Sunil Mallenahalli

Pratibha said...

ಇಲ್ಲ ಸುನಿಲ್ ರವರೆ, ನಮ್ಮ ವಿನುತಾಳ ಭಾವನೆಗಳು, ಅಭಿವ್ಯಕ್ತಿ ಮಾತ್ರ ಪ್ರಬುದ್ಧವಾಗಿದೆ..ಅವಳು ನಿಮಗಿಂತ ಕಿರಿಯವಳು...

@ವಿನು, ನಿನ್ನ ಬದಲು ನಾನು ಉತ್ತರಿದ್ದಕ್ಕೆ ಕ್ಷಮೆ ಇರಲಿ, ಆದರೆ ಇದನ್ನು ಓದಿ ನಾನು ಗೇಲಿ ಮಾಡುತ್ತಿದ್ದುದು ನೆನಪಾಯಿತು...ನಗು ತಡೆಯಲಾಗಲಿಲ್ಲ..:)

ಮಲ್ಲಿಕಾರ್ಜುನ.ಡಿ.ಜಿ. said...

ಮೇಡಂ,
ಪ್ರಶ್ನೆಯಲ್ಲೇ ಉತ್ತರ, ಉತ್ತರದಲ್ಲೇ ಪ್ರಶ್ನೆ...
ಚೆನ್ನಾಗಿದೆ...
ಪ್ರೀತಿಯ ನಾನಾ ಮುಖಗಳನ್ನು ಕಾಣಿಸಿರುವಿರಿ.

ವಿನುತ said...

ಧನ್ಯವಾದಗಳು ಮಲ್ಲಿಕಾರ್ಜುನರವರೇ, ಹೊಸ ರೀತಿಯಲ್ಲಿ ನೋಡಿದ್ದೀರಿ..