skip to main |
skip to sidebar
ಯಾವುದು ಸತ್ಯ?
ಕಣ್ಣಿಗೆ ಕಂಡದ್ದೇ ಸತ್ಯವೇ
ಕಿವಿ ಆಲಿಸಿದ್ದೇ ಸತ್ಯವೇ
ಬುದ್ಧಿಗೆ ತೋಚಿದ್ದೇ ಸತ್ಯವೇ
ಹೃದಯ ಭಾವಿಸಿದ್ದೇ ಸತ್ಯವೇ
ಯಾವುದು ಸತ್ಯ?
ಕುರುಡನ ಕನಸು ಸತ್ಯವೇ
ಮೂಕನ ಗಾಯನ ಸತ್ಯವೇ
ಹೆಳವನ ನರ್ತನ ಸತ್ಯವೇ
ಕಟುಕನ ಕರುಣೆ ಸತ್ಯವೇ
ಯಾವುದು ಸತ್ಯ?
ಸಾಕ್ಷ್ಯಗಳೇ ಸತ್ಯವೇ
ಸತ್ಯಕ್ಕೆ ಸಾಕ್ಷ್ಯಗಳೇ
ಸಾಕ್ಷ್ಯವು ಸಿಗದಿರುವುದೇ
ಸಾಕ್ಷ್ಯವಿಲ್ಲವೆನ್ನಲು ಸಾಕ್ಷಿಯೇ
ಯಾವುದು ಸತ್ಯ?
ಗ್ರಹಿಕೆಯೇ ಸತ್ಯವೇ
ಅದಕ್ಕೆ ಮೀರಿದ್ದು ಭ್ರಮೆಯೆ
ನಂಬಿಕೆಯೇ ಸತ್ಯವೆ
ಸತ್ಯವೇ ನಂಬಿಕೆಯೆ
ಯಾವುದು ಸತ್ಯ?
ತಾಯಿಯೆನ್ನುವುದು ಸತ್ಯ
ತಂದೆಯೆನ್ನುವುದು ನಂಬಿಕೆ
ದೇಹವೆನ್ನುವುದು ಸತ್ಯ
ಆತ್ಮವೆನ್ನುವುದು ನಂಬಿಕೆ
ದೇಹಾತ್ಮಗಳಿಂದಲೇ ಜೀವನದರ್ಥವೇ?
-ವಿನುತ
4 comments:
ನಮಗೆ ಯಾವು ಸತ್ಯವೆನಿಸುತ್ತೋ ಅದು ಸತ್ಯವಷ್ಟೆ! :-)
ಎಲ್ಲರಿಗೂ ಅವರಿಗನಿಸಿದ್ದೇ ಸತ್ಯವಾದರೆ, ಎಷ್ಟೊಂದು ಸತ್ಯಗಳಾಗುತ್ತವೆ, ಆದರೆ ಸತ್ಯ ಅನ್ನುವುದು ಒಂದೇ ಅಲ್ವಾ?.. ಯೋಚಿಸ್ತಾ ಹೋದ್ರೆ ಎಲ್ಲಿಗೋ ಕರೆದೊಯ್ಯತ್ತೆ :)
ಸತ್ಯವೆನ್ನುವುದು ಒಂದೇನೇ? ಇದು ಸತ್ಯವೇ? :-)
ಗೊತ್ತಿಲ್ಲ. ಅದೇ ಯಕ್ಷಪ್ರಶ್ನೆ!!! :)
Post a Comment